ಪುಸ್ತಕ ಲೋಕದಲ್ಲಿ ಒಂದು ಹೊಸ ಬೆಳಕು!
ಪುಸ್ತಕ ಪ್ರಿಯರಿಗೆ, ಆಧ್ಯಾತ್ಮಿಕ ಆಸಕ್ತರಿಗೆ ಒಂದು ಸಿಹಿ ಸುದ್ದಿ! ಜ್ಞಾನಯೋಗಿ ಎಂಬ ಹೊಸ ಲೇಖಕರು ಕೆಲವು ವರ್ಷಗಳಿಂದ ಕರ್ನಾಟಕದ ಜನರಲ್ಲಿ ಅಪಾರವಾದ ಜ್ಞಾನವನ್ನು ಹರಡುತ್ತಿದ್ದಾರೆ. ಸ್ವಲ್ಪ ಸಮಯದಲ್ಲಿಯೇ ಅವರು ತಮ್ಮ ವಿಶಿಷ್ಟವಾದ ಬರವಣಿಗೆಯ ಮೂಲಕ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ಜ್ಞಾನಯೋಗಿ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸುವ ಒಂದು ಮಹಾನ್ ಚೇತನವಾಗಿದ್ದಾರೆ. ಅವರು ತಮ್ಮ ಬರಹಗಳ ಮೂಲಕ ತಮ್ಮಲ್ಲಿರುವ ಅಗಾಧವಾದ ಜ್ಞಾನವನ್ನು ಹರಡುತ್ತಿದ್ದಾರೆ; ಈ ಮೂಲಕ ವಿಶ್ವದ ಒಳಿತಿಗಾಗಿ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗನಾಗಿ ಜನಿಸಿರುವ ಜ್ಞಾನಯೋಗಿ ಎಂಬ ಈ ಸಣ್ಣ ಕಾಂತಿಯು ಸಧ್ಯಕ್ಕೆ ಕರ್ನಾಟಕದಲ್ಲಿ ತನ್ನ ಬೆಳಕನ್ನು ಹರಡಲು ಪ್ರಾರಂಭಿಸಿದೆ; ಶೀಘ್ರದಲ್ಲೇ ಪ್ರಪಂಚದಾದ್ಯಂತ ತನ್ನ ಬೆಳಕನ್ನು ಹರಡಲಿದೆ.
ಜ್ಞಾನಯೋಗಿ ಅವರು ಬರೆದಿರುವ ಪುಸ್ತಕಗಳು ಮಾತ್ರವೇ ಅಲ್ಲದೆ ಇನ್ನೂ ಅನೇಕಾನೇಕ ಪುಸ್ತಕಗಳಿಗಾಗಿ ಭೇಟಿ ಕೊಡಿ
ಭಗವದ್ಗೀತೆಯ ಆಳವಾದ ವಿಚಾರಗಳನ್ನು ಜ್ಞಾನಯೋಗಿ ಅವರು “ಭಗವದ್ಗೀತಾಮೃತ" ಎಂಬ ಈ ಕೃತಿಯಲ್ಲಿ ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಶ್ಲೋಕಗಳ ಅರ್ಥವನ್ನು ಮಾತ್ರವಲ್ಲದೆ, ಅದರ ಒಳಗಿನ ನಿಜವಾದ ಸಾರವನ್ನು ವಿಶ್ಲೇಷಿಸಿ ಹೊರತೆಗೆಯುವ ಅವರ ದೃಷ್ಟಿಕೋನವು ಓದುಗರ ಚಿಂತನೆಗೆ ಹೊಸ ದಿಕ್ಕನ್ನು ನೀಡುತ್ತದೆ. ಭಗವದ್ಗೀತಾಮೃತವನ್ನು ಓದುವುದರಿಂದ ಜೀವನದ ಸಮಸ್ಯೆಗಳಿಂದ ತೊಳಲುತ್ತಿರುವ ಮನಸ್ಸಿಗೆ ಶಾಂತಿ ದೊರೆಯುತ್ತದೆ, ಗೊಂದಲಗಳಿಂದ ತತ್ತರಿಸಿದ ಬುದ್ಧಿಗೆ ಸ್ಪಷ್ಟತೆ ದೊರೆಯುತ್ತದೆ. ಈ ಗ್ರಂಥವು ಓದುಗರಲ್ಲಿ ಧೈರ್ಯ, ಸಮತೋಲನ ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತದೆ; ಕರ್ಮವನ್ನು ಮಾಡುವ ಸರಿಯಾದ ವಿಧಾನವನ್ನು ಕಲಿಸುತ್ತದೆ; ಫಲಾಸಕ್ತಿಯಿಂದ ಹೊರಬಂದು ನಿಜವಾದ ಶಾಂತಿಯನ್ನು ಅನುಭವಿಸುವ ಮಾರ್ಗವನ್ನು ತೋರಿಸುತ್ತದೆ. ಬದುಕಿನ ಏರುಪೇರಿನಲ್ಲಿ ದಾರಿ ತಪ್ಪಿದಾಗ ಕೈಹಿಡಿದು ನಡೆಸುವ ಮೌನ ಮಾರ್ಗದರ್ಶಿಯಂತೆ ಈ ಪುಸ್ತಕ ನಮ್ಮೊಂದಿಗೆ ನಿಲ್ಲುತ್ತದೆ. ಜ್ಞಾನಯೋಗಿ ಅವರು ಬರೆದಿರುವ ಈ "ಭಗವದ್ಗೀತಾಮೃತ"ವು ಪ್ರತಿಯೊಬ್ಬ ಓದುಗರ ಮನದಲ್ಲಿ “ನನ್ನ ಜೀವನವನ್ನು ಒಳಗಿನಿಂದಲೇ ರೂಪಾಂತರಗೊಳಿಸಿದ ಗ್ರಂಥವಿದು” ಎಂಬ ಅನುಭವವನ್ನು ಖಂಡಿತವಾಗಿಯೂ ಮೂಡಿಸುತ್ತದೆ.
View cart
Add to cart