ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ಅಮೂಲ್ಯವಾದ ಸುಭಾಷಿತಗಳಿಗೆ ಅದ್ಭುತವಾದ ವಿಶ್ಲೇಷಣೆಯನ್ನು ನೀಡಿದ್ದಾರೆ. ಯಾರ ಜನ್ಮ ಶ್ರೇಷ್ಠ ಮತ್ತು ಸಾರ್ಥಕವಾಗುತ್ತದೆ? ಶಕ್ತಿವಂತರಾಗಲು ಮತ್ತು ಶ್ರೇಷ್ಠ ವ್ಯಕ್ತಿಗಳಾಗಲು ನಾವೇನು ಮಾಡಬೇಕು? ನಾವು ಮತ್ತೆ ಹುಟ್ಟಬೇಕೋ, ಅಥವಾ ಮುಕ್ತಿಯನ್ನು ಹೊಂದಬೇಕೋ? ನಾವು ಹುಟ್ಟು-ಸಾವಿನ ಚಕ್ರದಲ್ಲಿ ನರಳಾಡುತ್ತಿರುವುದು ಏಕೆ? ಕಷ್ಟಗಳಿಂದ ನಮಗೆ ದೊರೆಯುವ ಲಾಭಗಳೇನು? ಮುಂತಾದ ಮಹತ್ತರವಾದ ವಿಚಾರಗಳನ್ನು ಅದ್ಭುತವಾಗಿ ವಿವರಿಸಿದ್ದಾರೆ.
ನಮ್ಮ ಬದುಕನ್ನೇ ಬದಲಾಯಿಸುವಂತಹ ಪುಸ್ತಕವಿದು. ಈ ಪುಸ್ತಕದಲ್ಲಿ ಜ್ಞಾನಯೋಗಿ ಅವರು ನಮ್ಮ ಪತನಕ್ಕೆ ಪ್ರಧಾನ ಕಾರಣಗಳೇನು? ನಾವು ನಿಶ್ಶಕ್ತರಾಗಿರಲು ಕಾರಣ ಮತ್ತು ಶಕ್ತಿವಂತರಾಗಲು ಮಾರ್ಗ ಯಾವುದು? ದೇವರನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು? ಮುಂತಾದ ಅನೇಕಾನೇಕ ಅದ್ಭುತ ರಹಸ್ಯಗಳನ್ನು ಬಟ್ಟ ಬಯಲು ಮಾಡಲಾಗಿದೆ. ಇದನ್ನು ಓದಿದ ನಂತರ ನಮ್ಮ ಜೀವನವು ಖಂಡಿತವಾಗಿಯೂ ಉತ್ತಮ ಜೀವನವಾಗಿ ಬದಲಾಗುತ್ತದೆ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ.
ಈ ಪುಸ್ತಕವು ನಮ್ಮ ಆಲೋಚನಾ ಶಕ್ತಿಯನ್ನು ವೃದ್ಧಿ ಮಾಡುತ್ತದೆ. ನಮ್ಮ ಆಲೋಚನೆಗಳು ಶ್ರೇಷ್ಠವಾದ ಆಲೋಚನೆಗಳಾಗಿ ಬದಲಾಗುವಂತೆ ಮಾಡುತ್ತದೆ. ನಮ್ಮ ಆಲೋಚನೆಗಳು ಹೇಗಿರುತ್ತವೆಯೋ, ನಮ್ಮ ಜೀವನವೂ ಹಾಗೇ ಇರುತ್ತದೆ. ನಾವು ಶ್ರೇಷ್ಠರು, ಶಕ್ತಿವಂತರು ಆಗಬೇಕಾದರೆ ನಮ್ಮ ಆಲೋಚನಾಶೈಲಿ ಶ್ರೇಷ್ಠವಾಗಿರಬೇಕು. ಅದಕ್ಕೆ ಈ ಪುಸ್ತಕ ಆಧಾರವಾಗುತ್ತದೆ. ನಮ್ಮನ್ನು ಶ್ರೇಷ್ಠರನ್ನಾಗಿ, ಶಕ್ತಿವಂತರನ್ನಾಗಿ ಬದಲಾಯಿಸುವ ಶಕ್ತಿಶಾಲಿ ಪುಸ್ತಕವಿದು.
ಈ ಪುಸ್ತಕದಲ್ಲಿ ಬೃಹತ್ ಸಾಧನೆಗಳನ್ನು ಸುಲಭವಾಗಿ ಸಾಧಿಸುವುದು ಹೇಗೆ? ದೌರ್ಭಾಗ್ಯ ಆವರಿಸದಿರಲು ಮನುಜ ತಾನೇನು ಮಾಡಬೇಕು? ನಮ್ಮ ಇಂದಿನ ಸ್ಥಿತಿಗೆ ಕಾರಣಗಳೇನು? ಐಶ್ವರ್ಯವಂತರಾಗಲು ಮಾರ್ಗೋಪಾಯಗಳೇನು? ಟೀಕೆ ಟಿಪ್ಪಣಿಗಳಿಗೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು? ಮುಂತಾದ ಅನೇಕಾನೇಕ ಅದ್ಭುತ ರಹಸ್ಯಗಳನ್ನು ವಿವರಿಸಲಾಗಿದೆ.